By ByndoorchiZalak, Pics: Lawrence Fernandes, 21 July 2024
ಬೈಂದೂರು: ಬೈಂದೂರು ಹೋಲಿಕ್ರೊಸ್ ಚರ್ಚಿನ ಕಥೊಲಿಕ್ ಸಭಾ, ಬೈಂದೂರು ಘಟಕ ಇವರ ನೇತೃತ್ವದಲ್ಲಿ ಹಾಗೂ ಚರ್ಚಿನ ಐ.ಸಿ.ವೈ.ಎಮ್. ಯುವ ಸಂಘಟನೆ, ಸ್ತ್ರೀ ಸಂಘಟನೆ, ಚರ್ಚಿನ ಆರೋಗ್ಯ ಆಯೋಗ ಸಮಿತಿ ಇವರ ಜಂಟಿ ಆಶ್ರಯದಲ್ಲಿ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ರವಿವಾರ, ಜುಲೈ 21 ರಂದು ಬೈಂದೂರು ಚರ್ಚಿನ ಸಂಭಾಗಣದಲ್ಲಿ ನೇರವೇರಿತು.ಚರ್ಚಿನ ಗುರುಗಳಾದ ರೆ| ಫಾ| ವಿನ್ಸೆಂಟ್ ಕುವೆಲ್ಲೊ ಕಾರ್ಯಕಮವನ್ನು ಉದ್ಘಾಟಿಸಿದರು. ಡಾ| ಸೋನಿ ಡಿ’ಕೋಸ್ತಾ (ಪ್ರಥಮ ಚಿಕಿತ್ಸೆ ತರೇಬೆತುದಾರರು, ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ), ಶ್ರೀ ಜಯಕರ ಶೆಟ್ಟಿ (ಸಭಾಪತಿಗಳು, ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ), ಶ್ರೀ ಶೇಖ್ ಫಾಯಜ್ ಆಲಿ (Advisor, Blood Health Care Karnataka®), ಶ್ರೀ ನಿತೀನ್ ಶೆಟ್ಟಿ (Chairman, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬೈಂದೂರು), ಶ್ರೀ ಶಿವರಾಮ ಶೆಟ್ಟಿ (Treasurer, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ), ಡಾ| ರೋಶನ್ ಪಾಯಸ್(ರೋಶನ್ ಹೋಮಿಯೊಪತಿ ಕ್ಲಿನಿಕ್, ಬೈಂದೂರು) ಮತ್ತು ಶ್ರೀ ಅಲ್ಫ್ರೆಡ್ ರೆಬೇರೊ (ಕಾರ್ಯದರ್ಶಿ, ಕಥೊಲಿಕ್ ಸಭಾ ಬೈಂದೂರು ಘಟಕ) ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಿ| ಅನ್ಸಿ ಪಾವ್ಲ್(ಮುಖ್ಯಸ್ತರು, ಹೋಲಿ ಕ್ರೊಸ್ ಕಾನ್ವೆಂಟ್), ಶ್ರೀಮತಿ ವೀಣಾ ಫೆರ್ನಾಂಡಿಸ್(ಚರ್ಚಿನ ಪಾಲನ ಮಂಡಳಿಯ ಕಾರ್ಯದರ್ಶಿ), ಶ್ರೀಮತಿ ಜೂಡಿತ್ ಲೋಬೊ (ಆರೋಗ್ಯ ಆಯೋಗ ಸಮಿತಿಯ ಸಂಚಾಲಕರು), ಶ್ರೀಮತಿ ಫ್ಲಾವಿಯಾ ರೆಬೆಲ್ಲೊ (ಅಧ್ಯಕ್ಷರು, ಸ್ತ್ರೀ ಸಂಘಟನೆ), ರೂಬೆನ್ ನಜ್ರೆತ್ (ಅಧ್ಯಕ್ಷರು, ಐ.ಸಿ.ವೈ.ಎಮ್. ಯುವ ಸಂಘಟನೆ) ಮತ್ತು ಪ್ರದೀಪ್ ಫೆರ್ನಾಂಡಿಸ್ (ಅಧ್ಯಕ್ಷರು, ಕಥೊಲಿಕ್ ಸಭಾ ಬೈಂದೂರು ಘಟಕ) ಕಾರ್ಯಕ್ರಮದಲ್ಲಿ ಹಾಜರಿದ್ದರು. ಡಾ| ಸೋನಿ ಡಿ’ಕೋಸ್ತಾರವರು ಆರೋಗ್ಯ ಹಾಗೂ ರಕ್ತದಾನ ವಿಷಯದಲ್ಲಿ ಮಾಹಿತಿಯನ್ನು ನೀಡಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರವತಿಯಿಂದ ಚರ್ಚಿನ ಗುರುಗಳಾದ ರೆ| ಫಾ| ವಿನ್ಸೆಂಟ್ ಕುವೆಲ್ಲೊರವರಿಗೆ ನೆನಪಿನ ಕಾಣಿಕೆಯನ್ನು ನೀಡಿದರು.ಈ ಸಂಧರ್ಭದಲ್ಲಿ ಕಳೆದ ಮೇ ತಿಂಗಳಿನಲ್ಲಿ Institute of Chartered Accountants of India ನಡೆಸಿದ C.A. ಪರೀಕ್ಷೆಯಲ್ಲಿ ತನ್ನ ಪ್ರಥಮ ಪ್ರಯತ್ನದಲ್ಲಿಯೆ ತೇರ್ಗಡೆಗೊಂಡು ವಿಶೇಷ ಸಾಧನೆ ಮಾಡಿದ ಬೈಂದೂರು ಚರ್ಚಿನ ನಿಕೋಲಾ ಡಾಯಸ್ ಇವರಿಗೆ ಸಭಾ ಕಾರ್ಯಕ್ರಮದಲ್ಲಿ ಅವರ ಸಾಧನೆಯನ್ನು ಪರಿಚಯಿಸಿ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. ರಕ್ತದಾನಿಗಳು ಸುಮಾರು 35 Unit ರಕ್ತದಾನ ಮಾಡಿ ಶಿಬಿರವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮಕ್ಕೆ ಕಥೊಲಿಕ್ ಸಭಾ ಬೈಂದೂರು ಘಟಕದ ಅಧ್ಯಕ್ಷ ಶ್ರೀ ಪ್ರದೀಪ್ ಫೆರ್ನಾಂಡಿಸ್ ಸ್ವಾಗತಿಸಿದರು, ಆರೋಗ್ಯ ಆಯೋಗ ಸಮಿತಿಯ ಸಂಚಾಲಕರಾದ ಶ್ರೀಮತಿ ಜೂಡಿತ್ ಲೋಬೊ ಧನ್ಯವಾದವನ್ನು ಅರ್ಪಿಸಿದರು ಮತ್ತು ಶ್ರೀಮತಿ ಜೊಸ್ಪಿನ್ ರೊಡ್ರಿಗಸ್ ಕಾರ್ಯಕ್ರಮವನ್ನು ನಿರೂಪಿಸಿದರು.