ಬೈಂದೂರು: ಬೈಂದೂರು ಹೋಲಿಕ್ರೊಸ್ ಚರ್ಚಿನ ಕಥೊಲಿಕ್ ಸಭಾ, ಬೈಂದೂರು ಘಟಕ ಇವರ ನೇತೃತ್ವದಲ್ಲಿ ಹಾಗೂ ಚರ್ಚಿನ ಐ.ಸಿ.ವೈ.ಎಮ್. ಯುವ ಸಂಘಟನೆ, ಸ್ತ್ರೀ ಸಂಘಟನೆ, ಚರ್ಚಿನ ಆರೋಗ್ಯ ಆಯೋಗ ಸಮಿತಿ ಇವರ ಜಂಟಿ ಆಶ್ರಯದಲ್ಲಿ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಚರ್ಚಿನ ಗುರುಗಳಾದ ರೆ| ಫಾ| ವಿನ್ಸೆಂಟ್ ಕುವೆಲ್ಲೊ ಕಾರ್ಯಕಮದ ಉದ್ಘಾಟಕರಾಗಿ, ಡಾ| ಸೋನಿ ಡಿ’ಕೋಸ್ತಾ (ಪ್ರಥಮ ಚಿಕಿತ್ಸೆ ತರೇಬೆತುದಾರರು, ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ), ಶ್ರೀ ಜಯಕರ ಶೆಟ್ಟಿ (ಸಭಾಪತಿಗಳು, ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ), ಶೇಖ್ ಫಾಯಜ್ ಆಲಿ (Advisor, Blood Health Care Karnataka®), ಡಾ| ರೋಶನ್ ಪಾಯಸ್(ರೋಶನ್ ಹೋಮಿಯೊಪತಿ ಕ್ಲಿನಿಕ್, ಬೈಂದೂರು) ಮತ್ತು ಅಲ್ಫ್ರೆಡ್ ರೆಬೇರೊ (ಕಾರ್ಯದರ್ಶಿ, ಕಥೊಲಿಕ್ ಸಭಾ ಬೈಂದೂರು ಘಟಕ) ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ರಕ್ತದಾನ ಮಾಡಿ ಸಹಕರಿಸಲು ಶಿಬಿರವನ್ನು ಆಯೋಜಿಸಿರುವ ಸಂಘಟನೆಯ ಅಧ್ಯಕ್ಷರು ಹಾಗೂ ಸದಸ್ಯರು ವಿನಂತಿಸಿದ್ದಾರೆ.